Nenapina putagala bannada chittara.....
ಸೋಮವಾರ, ಏಪ್ರಿಲ್ 30, 2012
Nenapina putagala bannada chittara.....: ಮತ್ತೆ ಬಂದ ಈ ಬೇಸಿಗೆ ರಜೆ....ಬಾಲ್ಯದ ಸಿಹಿ ಸಿಹಿ ನೆನೆಅಪು...
Nenapina putagala bannada chittara.....: ಮತ್ತೆ ಬಂದ ಈ ಬೇಸಿಗೆ ರಜೆ....ಬಾಲ್ಯದ ಸಿಹಿ ಸಿಹಿ ನೆನೆಅಪು...: ಆಬ್ಬ .... ಅದೆಂತ ಮೋಜು ... ಬೇಸಿಗೆ ರಜೆ ಬಂದಾಗ ..... ನನಗೆ ಎಸ್ಟೋ ಬಾರಿ ಅನಿಸಿದ್ದಿದೆ...ಯಾಕಾದರೂ ಬಾಲ್ಯ ಕಳೆಯಿತೋ.... ನನ್ನ ಪ್ರಾಥಮಿಕ ಶಾಲೆ ಮಲೆನಾಡಿನ ಸೊಬಗು ಹೊ...
ಶನಿವಾರ, ಏಪ್ರಿಲ್ 16, 2011
ಮತ್ತೆ ಬಂದ ಈ ಬೇಸಿಗೆ ರಜೆ....ಬಾಲ್ಯದ ಸಿಹಿ ಸಿಹಿ ನೆನೆಅಪುಗಳು..
ಆಬ್ಬ .... ಅದೆಂತ ಮೋಜು ... ಬೇಸಿಗೆ ರಜೆ ಬಂದಾಗ ..... ನನಗೆ ಎಸ್ಟೋ ಬಾರಿ ಅನಿಸಿದ್ದಿದೆ...ಯಾಕಾದರೂ ಬಾಲ್ಯ ಕಳೆಯಿತೋ.... ನನ್ನ ಪ್ರಾಥಮಿಕ ಶಾಲೆ ಮಲೆನಾಡಿನ ಸೊಬಗು ಹೊದ್ದಿರುವ ಊರಾದ ಮಂಜುಗುಣಿ ಶಾಲೆ...ಚಿಕ್ಕವರಿರುವಾಗ ಬೇಸಿಗೆ ರಜೆ ಬಂತೆಂದು ಕುಶಿಯೋ ಕುಶಿ....ಆಜ್ಜಿ ಮನೆಗೆ ತೆರಳುವ ಕಾತುರ... ಅಲ್ಲ್ಲಿ ನನ್ನ ಬಾಲ್ಯದ ಗೆಳೆಯರಾದ ಶೇಷ ... ಗಣಪು.. ಮಹೇಶ...ಮೊದಲಾದವರನ್ನು ಎಂದು ನೋದುವೇನೋ ಎಂಬ ಕಾತುರ... ಅವರ ಜೊತೆ ಮಡಿದ ... ದೊಡ್ಡ ಮರದ ಮಾವಿನಕಾಯಿ ತೆಗೆಯಲು ಹೋಗಿ ಆಡು ಕೈಗೆ ಸಿಗದೇ ಮರಕ್ಕೆ ಕಲ್ಲು ಹೊಡೆದಿದ್ದು... ಅದು ಹೋಗಿ ಪಕ್ಕದ ಮನೆ ಹಂಚಿನ ಮಾಡಿನ ಮೇಲೆ ಬಿದ್ದಿದ್ದು.... ಹಲಸಿನ ಹಣ್ಣನು ತೆಗೆಯುವ ಗಣಪುನ ಕೌಶಲ್ಯ ನೋಡಿ ಬೆರಗಾದದ್ದು .....ಅಬ್ಬ !!! ಎಸ್ಟೊಂದು ನೆನಪುಗಳು ..., ಹಲಗೆ ಹಣ್ಣು.. ಆಲೆ ಮನೆ ...ಸಿರ್ಸಿ ಜಾತ್ರೆ ....ನೇರಳೆ ಹಣ್ಣು ... ಮಂಜುಗುಣಿ ತೇರು..ನೂರಾರು ನೆನಪುಗಳನ್ನು ತರುತಿದೆ .... ಈ ಬೇಸಿಗೆ ರಜ... ಒಮ್ಮೊಮೆ ಬರುವ ಬೇಸಿಗೆಯ ಮಳೆ ... ಆ ಮಣ್ಣಿನ ವಾಸನೆ .... ದೊಡ್ಡವರು ಮಾತಾಡುವ ಆರ್ಥವಾಗದ ಮಾತುಗಳು.... ಎಲ್ಲ ಚಿಕ್ಕಮ..ದೊಡ್ಡಮ್ಮ ... ಮಾವನ ಮಕ್ಕಳ ಜೊತೆ ಆಟ ಆಡಿದ್ದು...... ತುಂಟಾಟ ಮಾಡಿ ಹೊಡೆತ ತಿಂದಿದ್ದು.... ಮೊದಲಬಾರಿ ಸೈಕಲ್ ಹೊಡೆಯಲು ಕಲಿತದ್ದು... ಮಲೆನಾಡಿನ ಸೊಬಗಿನ ನಡುವೆ .... ಬೇಸಿಗೆಯ ರಜೆಯ ಮಜಾ ..ವರ್ಣಿಸಲು ಪದಗಳೇ ಕೊರತೆಯಾಗಿದೆ... ಎಸ್ಟೋ ಬಾರಿ ಅನಿಸಿದ್ದಿದೆ ... ಯಾಕೆ ಬೇಕಿತ್ತು ....ಈ ಕೆಲಸ, ಈ ಆಫೀಸ್ .. ಈ ಬೆಂಗಳೂರು ... ಯಾಕಾದರೂ ನನ್ನ ಬಾಲ್ಯ ಕಳೆಯಿತೋ .... ಈ ಬೆಂಗಳೂರೆಂಬ ಕಾಂಕ್ರಿಟ್ ಕಾಡಿನ ನಡುವೆ ಬಾಲ್ಯದ ಸಿಹಿ ನೆನಪುಗಳನ್ನು ಮೆಲಕು ಹಾಕಲು ಪುರುಸೊತ್ತಿಲ್ಲದ ವಿವಿಧ ಕೆಲಸದ ಒತ್ತಡಗಳು ..... ಬಾಲ್ಯದ ನೆನಪುಗಳನು ಮರೆಯಲು ಸಾದ್ಯವೆ ??? ಈಗ .. ಕೇವಲ ನಿಟ್ಟುಸಿರು ಬಿಟ್ಟು ಮುಂದಿನ ಪ್ರಾಜೆಕ್ಟ್ ಬಗ್ಗೆ ಆಲೋಚಿಸುವ ಅನಿವಾರ್ಯತೆ ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)